ಸೋಮವಾರ, ಜೂನ್ 28, 2010

ಹೃದಯದಿ ಪ್ರೆಮತರಂಗ ನೀ ಮೀಟಿದೆ...

ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಒಲವಿನ ಹೂಗಳ ಮಳೆಯ ನೀ ಸುರಿಸಿದೆ
ಕುಣಿಯುತ ಮನಸಿದು ನಿನ್ನೆಡೆಗೆ ಸಾಗಿದೆ
ಸಾಗುತ ದೂರ ದೂರ ನಡೆಯೆಂದಿದೆ
ಹೃದಯದಿ ಪ್ರೀತಿ ಮಳೆಹನಿಯಾಗಿ ದುಮುಕಿದೆ
ನನ್ನುಸಿರಿಗೆ ಉಸಿರಾಗಿ ನಿನ್ನ ಹೆಸರು ಬರೆದಿದೆ
ಕಾಲ ಬರೆದ ಹೊಸದು ಹಾಡು ನೀ ಹಾಡಿದೆ
ಮನದ ಪುಟದಿ ಒಲವ ಕವಿತೆ ನೀ ಬರೆದೆ
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ನೀ ಹರಿಸಿದೆ
ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ...ಶನಿವಾರ, ಜೂನ್ 5, 2010

ಮನದ ಪುಟದಿ ನೀ ಬರೆದ ಗೀತೆ ಮರೆಯಲಾರೆನು....


ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯಗುರುತು
ತೊರೆದು ಹೋಗದಿರು ನನ್ನ ನೀ ಮರೆತು
ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು
ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು
ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು
ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು
ಯಾವುದ ಮರೆತರೂ ಮರೆಯಲಾಗುವುದೇ ಉಸಿರು
ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು...