ಸೋಮವಾರ, ಜೂನ್ 28, 2010

ಹೃದಯದಿ ಪ್ರೆಮತರಂಗ ನೀ ಮೀಟಿದೆ...

ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಒಲವಿನ ಹೂಗಳ ಮಳೆಯ ನೀ ಸುರಿಸಿದೆ
ಕುಣಿಯುತ ಮನಸಿದು ನಿನ್ನೆಡೆಗೆ ಸಾಗಿದೆ
ಸಾಗುತ ದೂರ ದೂರ ನಡೆಯೆಂದಿದೆ
ಹೃದಯದಿ ಪ್ರೀತಿ ಮಳೆಹನಿಯಾಗಿ ದುಮುಕಿದೆ
ನನ್ನುಸಿರಿಗೆ ಉಸಿರಾಗಿ ನಿನ್ನ ಹೆಸರು ಬರೆದಿದೆ
ಕಾಲ ಬರೆದ ಹೊಸದು ಹಾಡು ನೀ ಹಾಡಿದೆ
ಮನದ ಪುಟದಿ ಒಲವ ಕವಿತೆ ನೀ ಬರೆದೆ
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ನೀ ಹರಿಸಿದೆ
ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ...ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ