ಶುಕ್ರವಾರ, ಜುಲೈ 23, 2010

ನೀ ಮತ್ತೆ ಸಿಗುವೆಯಾ ಗೆಳೆಯನೆ ಹೃದಯ ಬಯಸಿದೆ...

ಮನ ಕಂಡ ಎಷ್ಟೋ ಕನಸದು ಕೊನೆಗೂ ನನಸಾಗಲೇ ಇಲ್ಲ

ನಿನ್ನ ಕಂಗಳಲ್ಲಿ ಕನಸಾಗಲೆಂದು ಬಯಸಿದ ನನ್ನ ಮನವಿಂದು ಸೋತಿದೆಯಲ್ಲ

ಉಸಿರಿನಲ್ಲಿ ಬೆರೆತುಹೋದ ನಿನ್ನ ಪ್ರೀತಿಯ ಹೊರತು ನಾನೆನ್ನು ಅರಿತಿಲ್ಲ

ಹೇಳಲಾಗದೆ ಬಳಲಿದೆ ಮನ ಇಂದು ಒಮ್ಮೆ ಹಿಂದಿರುಗಿ ನೋಡಲಾರೆಯ ನಲ್ಲ

ಪ್ರೀತಿಕಂಡ ಮನಸ್ಸು ಒಂದು ಮಗುವಿನ ಹಾಗೆ ಅಳುವುದೇ ಹೊರತು ಮಾತನಾಡಲು ಬಾಯಿಲ್ಲ

ನನ್ನ ಪ್ರೀತಿಯ ಸಂದೇಶವ ತಲುಪಿಸಲು ನನಗೆ ಯಾವ ಮಾರ್ಗವು ತಿಳಿದಿಲ್ಲ

ನನ್ನ ಕಂಗಳಲ್ಲಿ ಅವಿತಿರುವ ಒಲವ ಬಾಷೆಯು ನಿನಗೇಕೆ ಕಾಣಲಿಲ್ಲ

ಕಾಣದ ದಾರಿಯ ನಡುವಲ್ಲಿ ನಿನ್ನೊಲವ ಕಾಣದೆ ಕತ್ತಲೆಯಲ್ಲಿ ನಾ ಕುಳಿತಿಹೆ ನಲ್ಲ

ಒಮ್ಮೆ ನೀ ಬಂದು ನನ್ನ ಸೇರಿದರೆ ಆ ಇರುಳಿನಲ್ಲಿ ಹೊಂಬೆಳಕ ಕಾಣುವೆನಲ್ಲ

ನೀನಿದ್ದ ದಾರಿಯಲಿ ನನಗೆ ಇರುಳು ಕೂಡ ಹಗಲಿನಂತೆ ಕಾಣುತಿಹುದಲ್ಲ

ಮರೆತು ಕೂಡ ಮರೆಯಲಾಗದು ನಿನ್ನ ನೀ ತಂದ ಮದುರವಾದ ಭಾವನೆಗಳನೆಲ್ಲ

ಕಾತುರದ ಕಣ್ಣಂಚಲಿ ಮುಗುಳುನಗೆಯ ಬೀರಿ ನಿನ್ನ ನಗೆಗೆ ಈ ಮನ ಸೋತಿದೆಯಲ್ಲ

ಈ ಹೃದಯವು ನಿನಗಾಗಿ ಮಿಡಿಯುತಿದೆ ಎಂದೆಂದಿಗೂ ಅದು ನಿನ್ನ ಮರೆಯುವುದಿಲ್ಲ....ಸೋಮವಾರ, ಜುಲೈ 19, 2010

ಕರೆದುಬಿಡು ನನ್ನ ನೀ ಬೇಗ ಬರೆದು ಕೊಡು ಎಲ್ಲ ಆ ವೇಗ....ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ

ಮರಳಿ ಕೊಡುವೆಯಾ ಗೆಳೆಯ ಮರಳಿ ಬರುವೆಯಾ..?

ಮಿಂಚಿನಂತೆ ಮಿನುಗಿಹೋದ ಆ ಹೊಳೆಯುವ ನಯನದಿ

ಮರಳಿ ನೋಡುವೆಯಾ ಗೆಳೆಯ ಮರಳಿ ಬರುವೆಯಾ...?

ಸುಂದರವಾದ ಸ್ವಪ್ನದಲಿ ತೇಲಿ ರಂಗೆನಿಸಿದ ನಗುವಲಿ

ಮರಳಿ ಕರೆಯುವೆಯಾ ಗೆಳೆಯ ಮರಳಿ ಬರುವೆಯಾ...?

ಕಂಪಿಸುವ ಕರದಲಿ ಹೂಗಳ ಹಿಡಿದು ನಲಿಸಿದ ಮನ ನಿನ್ನದು

ಮರಳಿ ಹೂಗಳ ತರುವೆಯಾ ಗೆಳೆಯ ಮರಳಿ ಬರುವೆಯಾ..?

ಒಲವೆಂಬ ದೋಣಿಯಲಿ ನಿನ್ನೊಡನೆ ಸಂಚರಿಸಿದ ಕಾಲವದು

ಮರಳಿ ನನ್ನೊಲವಿನ ಪಯಣಿಗನಾಗುವೆಯಾ ಗೆಳೆಯ ಮರಳಿ ಬರುವೆಯಾ...?

ನಿನ್ನ ಮಿಂಚುವ ಕಣ್ಣಂಚಲ್ಲಿ ನಾ ಹೊಳೆಯುವ ಬಿಂಬವಾದ ದಿನವದು

ನಿನ್ನ ಕಂಗಳಲ್ಲಿ ನನ್ನ ತುಂಬಿ ಕೊಳ್ಳುವೆಯಾ ಗೆಳೆಯ ಮರಳಿ ಬರುವೆಯಾ...?

ಶನಿವಾರ, ಜುಲೈ 3, 2010

ಕಾಯುವೆ...


ಈ ಮುಸ್ಸಂಜೆಯಲ್ಲಿ


ನೀ ನನ್ನ ಜೊತೆಜೊತೆಯಲಿ


ನನ್ನ ಕಣ್ಣಲ್ಲಿ ಅವಿತಿರುವ ಪುಟ್ಟ ಕನಸಿನಲ್ಲಿ ತೇಲಿ


ಒಲವೆಂಬ ದೋಣಿಯಲ್ಲಿ ಒಂಟಿಯಾಗಿ ಸಾಗುತ್ತಿರುವೆ


ನೀ ನನ್ನ ಮನಗೆದ್ದ ಒಲವೆ ನನ್ನ ಮನೆಗೆಂದು ಕರೆವೆ


ನೀ ಕರೆಯುವ ಕ್ಷಣಕ್ಕಾಗಿ ನಾ ಕೊನೆವರೆಗೂ ಕಾಯುವೆ...