ಬುಧವಾರ, ಫೆಬ್ರವರಿ 24, 2010

ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ ಮರಳಿ ಕೊಡುವೆಯಾ ಗೆಳೆಯ ಮರಳಿ ಬರುವೆಯಾ..?


ಆ ದಿನದ ಇರುಳಿನಲಿ ನಿನ್ನ ಕಂಡ ಮೇಲೆ ! ಏನಾಯ್ತೋ ನಾ ಕಾಣೆ
ನಿಂತಲ್ಲಿ ನಿಲ್ಲಲಾಗುತಿಲ್ಲ , ಕುಣಿಯುವಂತೆ ಆಗಿದೆ ದೇವರ ಮೇಲಾಣೆ !
ನೀ ದೊರಕಿ ಬಿಟ್ಟರೆ ಸಾಕು ಗೆಳೆಯ ಬೇರೆ ಏನು ಬೇಡ ಕಣೋ
ಕಣ್ಣ ರೆಪ್ಪೆಯಲಿ ನಿನ್ನ ಮುಚ್ಚಿಟ್ಟು ನಾ ಕಾಯುವೆ ನಿನ್ನಾಣೆ
ಮರಳಿನ ಬರೆದ ಬರಹವು ನೀನಲ್ಲ ಗೆಳೆಯ ಅಲೆ ಬಂದಾಗ ಅಳಿಸಿ ಹೋಗಲು
ನನ್ನೆದೆಯಲಿ ಕೊರೆದಿದೆ ನಿನ್ನ ಹೆಸರು ಅದ ಅಳಿಸಲು ಸಾದ್ಯವಿಲ್ಲ ಯಾವಾಗಲೂ
ಏನೋ ಒಂದು ರೀತಿಯ ಆನಂದ ನನಗೆ ನಿನ್ನ ನೆನಪಗಲೂ
ನೀ ಜೊತೆಯಿದ್ದರೆ ಸಾಕು ನನಗೆ ಇರುಳು ಕೂಡ ಹಗಲು !
ಮರೆತು ಕೂಡ ಮರೆಯಬೇಡವೋ ಗೆಳೆಯ ನೀ ನನ್ನ ಪ್ರೀತಿ
ಅದು ನೀಲಿ ಆಗಸದಂತೆ ಶುಭ್ರ ವರ್ಣ ಈ ಪ್ರೀತಿ
ಅನುಮಾನವೇಕೆ ನಿನಗೆ ನನ್ನಲ್ಲಿ ಈ ರೀತಿ ಒಪ್ಪಿಕೊಂಡು ಬಿಡು ನನ್ನ ನೀ ನೀಡಿ ನಿನ್ನ ಪ್ರೀತಿ !
ಸವಿಯಾಗಿ ಬರೆಯಲು ಕವಿಯು ನಾನಲ್ಲ
ಮಾತಿನ ಮನೆಯಲಿ ನಿನ್ನ ಚೆಲುವ ವರ್ಣಿಸಲು ನನಗೆ ಆಗೋಲ್ಲ
ನಿನ್ನ ಪ್ರೀತಿಗೆ ನಾ ಕಾದಿರುವೆ ಅದು ಸುಳ್ಳಲ್ಲ ಬದುಕು ಹೀಗೇಕೆ ಅರ್ಥ ಆಗುತ್ತಿಲ್ಲ !
ಜೊತೆ ನೀ ಬಂದರೆ ಅದಕಿಂತ ಬದುಕಿನಲಿ ಬೇರೆ ಬೇಕಿಲ್ಲ !

ಸೋಮವಾರ, ಫೆಬ್ರವರಿ 22, 2010

ಕತ್ತಲೆಯ ಹೊತ್ತ ಈ ಮುಖವ ಮರೆತುಬಿಡು ಬೆಳಕಿನಲಿ....


ಓ ಹುಣ್ಣಿಮೆ ಚಂದ್ರನೆ ನೀನೇಕೆ ಬಂದೆ...

ನೀ ಬಂದು ಕಂಗಳಲಿ ಕಣ್ಣಿರು ತಂದೆ...

ನಿನ್ನುಸಿರಿನ ಲಾಲಿ ನಾ ಹಾಡಲೆಂದೆ....

ಉಸಿರಿಂದ ನೀ ನನ್ನ ಸರಿದೂರ ಎಂದೆ....

ಹೊಂಗನಸ ಹಾದಿಯಲಿ ನೀನಾಗು ಜೊತೆಗಾರ....

ಕುಣಿದಾಡುವೆ ನಾ ಅಂದು ನಿನ್ನ ಮನದಿ ಮನಸಾರ...

ನಿನ್ನೊಲವ ಪಯಣದಲಿ ನಾನಾಗಲೇ ಸಂಗಾತಿ.....

ನಿನ್ನ ಮದುರವಾದ ದನಿಯಲಿ ನಾನಾಗಿರುವೆ ಜೊತೆಗಾತಿ.....

ಇನ್ನೆಂದು ನೀ ಕಾಣುವೆ ನನ್ನ ಮನದ ಅಂಗಳದಿ ....?

ಕಾಯುತ್ತಿರುವೆ ನಾ ಮೆರೆಯಲು ನಿನ್ನೊಲವ ಬಾಂಗಳದಿ......

ಈ ಜೀವದ ಜೊತೆಯಲಿ ನೀನಾಗುವೆಯಾ ಜೀವನದಿ.......

ಕೊನೆಗೊಳ್ಳುವುದು ಅಂದೇ ಈಬಾಳು ಸಾರ್ಥಕದಿ...........

ಸಾರುವ ಲೋಕಕೆ ಪ್ರೀತಿಯೊಂದೆ ಶಾಶ್ವತ ......


ಸುಳಿಯುತಿದೆ ಪ್ರೀತಿಯ ತಂಗಾಳಿ ಮನದಲಿ ಬೀಸಿ

ಹರಿಯುತಿದೆ ಕನಸ ನದಿಯು ಎದೆಯಲಿ ಹೂ ಹಾಸಿ

ನಿನ್ನ ಕಾಣುವ ನನ್ನ ಕಂಗಳಿಗೆ ತುಂಬಲಿ ಹೊಸ ಕನಸು

ಅರೆಕ್ಷಣ ನೀ ಮರೆಯಾದರು ನಿನ್ನಗಲಿ ಬಾಳದು ಈ ಮನಸು

ನಿನ್ನ ಕಣ್ಣ ನೋಟದಲಿ ಅಡಗಿದೆ ಎಂಥ ಮನಮೋಹಕ ಸೊಗಸು...

ಕುಸಿಯುವುದು ಈ ಮನ ನೀ ತೋರಿದರೆ ಮುನಿಸು......

ಕಾರಣ ಕೇಳಬೇಡ ನನಗೆ ತಿಳಿಯದು ಈ ತವಕದ ಒಗಟು....

ನೀನಿಲ್ಲದ ಬಕುದು ನನಗೆ ಜೇನಿಲ್ಲದ ಹೂವಿನ ಹಂದರ.....

ನಿನ್ನ ಕಾಣದೆ ನನ್ನ ಬದುಕಿನಲಿ ಬರಿ ನಶ್ವರ...

ಸಿಹಿಯಾದ ನಿನ್ನ ಮಾತು ಕೇಳದೆ ನನ್ನ ಬದುಕಾಗಿದೆ ಸವಿ ಇಲ್ಲದ ಸ್ವರ.....

ನನ್ನ ನಲ್ಮೆಯ ನಾವಿಕ ನೀನಾಗು ನನ್ನ ಬಾಳಿಗೆ ನಾದ ಸ್ವರ

ನಮ್ಮ ಸ್ನೇಹ ಹೀಗೆ ಸಾಗಲಿ ತುಂಬ ಒಲವ ಸವಿವಾಣಿ

ಯಾಕೆಂದರೆ ನೀ ನನ್ನ ಪಾಲಿನ ಸುಮದುರ ಕವಿವಾಣಿ......

ನಾ ಹೇಗೆ ಹೇಳಲಿ ನಿನಗೆ ಈ ನನ್ನ ಮನಸ್ಸಿನ ಕದನ ನಾ ಹೇಳಿದರು ನೀ ಕೇಳಿದರು ಇದೊಂದು ಪೂರ್ಣವಾಗದ ಕವನಕನಸಾಗಲೆಂದು ಬಂದೆ ನೀ ನನಗೆ ಕಣ್ಣಿರು ತಂದೆ


ಮನಸ ಸೇರಲೆಂದೆ ನೀ ದೂರ ಸರಿಯೆಂದೆ....


ನನ್ನ ಕನಸು ಕರಗಿ ಕಂಬನಿ ಜಾರುವ ಮುನ್ನ...


ಒರೆಸು ನೀ ನನ್ನ ಕಣ್ಣಿರನ್ನ.....


ಸೊಗಸಾದ ಒಲವೊಂದು ಬಡಿಯುತಿದೆ ನಿನ್ನೆದೆಯ ಬಾಗಿಲನ್ನ...


ಒಮ್ಮೆ ಕಣ್ತೆರೆದು ನೋಡು ತುಂಬಿಕೊಂಡು ಒಲವನ್ನ.....


ಕಾದಿಹುದು ಸವಿಸುಂದರವಾದ ಕರವು ಹಿಡಿದು ಚೆಲುವ ಹೂವನ್ನು ....


ಒಮ್ಮೆ ಪಡೆದು ಸಾರ್ಥಕ ಮಾಡು ಆ ಬಡ ಮನಬಯಸುವ ಒಲವನ್ನು .....


ನೀನಿಲ್ಲದೆ ಆ ಮನವು ಸುರಿಸುತಿದೆ ಮಿಡಿವ ಕಂಬನಿಯನ್ನು .....


ದಿಕ್ಕಿಲ್ಲದೆ ನಿಂತಿದೆ ದಾರಿಯಲ್ಲಿ ಕಾಯುತ ನಿನ್ನ ಹೆಜ್ಜೆಯ ಗುರುತನ್ನು....


ನಿನ್ನೊಲವ ಗೆಲ್ಲಲು ಕನಸುಕಂಡು ಸೋತಿಹೆ ಮನವು ಕಾಯುತ ನಿನ್ನಲ್ಲಿ....


ಎಲ್ಲಿ ಹೋದೆ ನನ್ನ ನೋಡದೆ ನನ್ನೊಡನೆ ಮಾತಾಡದೆ ಮರೆಯಾಗಿ.....


ಕಾದಿಹೆನಾ ಕಣ್ಣಂಚಲಿ ಸಣ್ಣ ಅಸೆಯೊಂದಿಗೆ ಕುಳಿತು ನಿನ್ನ ನಿರೀಕ್ಷೆಯಲ್ಲಿ....

ಕಡಲ ಅಲೆಗಳಂತೆ ನಾವು ಜೊತೆಯಾಗಿ ಸಾಗುವೆವು ಆದರೆ ಅವುಗಳಂತೆ ಕೊನೆವರೆಗು ಬಾಳಲಾರೆವು...


ಕನಸು ಕಾಣುವ ಕಂಗಳಿಗೆ ತುಂಬಲಿ ಹೊಸ ಕಾಂತಿ ....

ನಿನ್ನ ಕಂಡ ದಿನವೇ ಮನಬಯಸಿತು ನಿನ್ನ ಪ್ರೀತಿ .....

ಸುಂದರ ಸ್ವಪ್ನದಲಿ ತೇಲಲಿ ಸವಿಯಾದ ನಿನ್ನೊಲವ ಶ್ರುತಿ......

ತಿಳಿದು ತಿಳಿದು ನನ್ನ ಹೀಗೆ ಕಾಡಿದರೆ ಮುಂದೇನು ನನ್ನ ಸ್ತಿಥಿ.......

ಸ್ವಪ್ನವಾ ತಂದ ನಿನ್ನ ಮನದಲಿ ಹೊಮ್ಮಲಿ ತುಸು ಪ್ರೀತಿ....

ಜೀವನೀನೆಂದು ತಿಳಿದಿದೆ ಈ ನನ್ನ ಕುರುಡು ಮನಸು......

ಜೊತೆಯಾದರೆ ನಿನ್ನ ಕರವು ಅಂದೆ ಈ ಜೀವನವು ಸೊಗಸು......

ಕಾಯುವ ಸಂಯಮ ಇನ್ನಿಲ್ಲ ದಯಮಾಡಿ ನಿನ್ನೊಲವ ಕಡೆಗೆ ನಡೆಸು.....

ಸುರಿಸುವೆ ಒಲವ ಮಳೆಯ ನಿನ್ನೆಡೆಗೆ ತುಂಬಿ ಹೊಂಗನಸ ಹನಿಯಾಗಿ....

ಬಾಳುವೆ ನಿನ್ನೊಡನೆ ಕೊನೆವರೆಗೂ ಸೇರಿ ಬೆಲ್ಲದ ಸವಿಯಾಗಿ....

ಕೊನೆಗೊಳ್ಳಲಿ ನನ್ನೀ ಜೀವನ ಸೇರಿ ನಿನ್ನ ಜೊತೆಯಲಿ ಒಂದಾಗಿ.....