ಶುಕ್ರವಾರ, ಫೆಬ್ರವರಿ 11, 2011

ಮನಸಿನ ಮಾತು....ಕಂಗಳಲಿ ಅವಿತಿರುವ ಕಣ್ಣೀರಿನ ಕಥೆಯ ಹೇಳಲಾರದೆ ಬಳಲುತಿದೆ ಈ ಮನವು

ಒಡಲೊಳಗೆ ಕೊರಗುತ್ತ ನಗಲಾಗದೆ ಮರುಗುತಿದೆ ಈ ತನುವು

ಈ ನೋವಿಗೆ ಕಾರಣವೇನೆಂದು ಹೇಳಲಾಗದೆ ನಡುಗುತಿದೆ ಹೃದಯವು

ಮನದಲ್ಲಿ ದುಗುಡವ ಅಡಗಿಸಿಕೊಂಡು ನಗಲಾರೆ ಎಂದಿದೆ ಈ ಮೊಗವು

ಈ ಇರುಳು ಕವಿದ ಮನಕೆ ಬೆಳಕು ನೀಡುವರು ಯಾರೋ ನಾ ಅರಿಯಲಾರೆ..?

ಎಂದೋ ಕರಗಿರುವ ಪ್ರೇಮ ಚಂದಮಾಮ ಹೊರಟುಬಿಡುವ ಕಾರ್ಮುಗಿಲ ಚಿಥೆಗೆ

ಇಂದು ಜೊತೆಗೇನೆ ಸಾಗೋ ನನ್ನ ನೆರಳು ಬೇಸರದಿ ಬರುತಲಿದೆ ಜೊತೆಗೆ

ಮುಳ್ಳುಗಳ ನಡುವೆ ಅಡಗಿರುವ ಈ ಹೂವಿಗೆ ಸಂತಸವ ನೀಡುವರು ಯಾರೋ ನಾ ಅರಿಯಲಾರೆ...?

3 ಕಾಮೆಂಟ್‌ಗಳು: