ಶುಕ್ರವಾರ, ಆಗಸ್ಟ್ 3, 2012

ಕಾಣಿಸದೆ ಕುಳಿತಿಹ ಒಲೆಯ ಓದಲು ಕವಿಯಾದೆ....





ಒಲೆಯ ಓದಲು ಕವಿಯಾದೆ....
ನಲಿವ ಮಂದಾರವಾದೆ,
ಸುಡುವ ನೇಸರವಾದೆ,
ಒಲವಿದು ಸುಡುತಿಹ ಭಯಕೆ ಕೊರಗಿ ಮರೆಯಾದೆ...

ಬರುವೆ ಸಂದೇಶದಂತೆ,
ಇರುವೆ ತಂಗಾಳಿಯಂತೆ,
ಬಯಸದೆ ಬರುತಿಹ ಒಲವಿನ ಮನಕೆ ದೊರೆಯಾದೆ...

ಮುತ್ತೊಂದ ನೀಡು ಕೆನ್ನೆಗೆ,
ಎಂದೆಂದೂ ಇರಲಿ ನನ್ನನಗೆ,
ಮೊದಲನೇ ಮುತ್ತನು ಪಡೆಯುವ ಆಸೆಗೆ ಮಗುವಾದೆ...

ಸುಡು ಈ ನನ್ನ ವಿರಹ,
ಕೊಡು ನೀ ತಂದ ಬರಹ,
ಕಾಣಿಸದೆ ಕುಳಿತಿಹ ಒಲೆಯ ಓದಲು ಕವಿಯಾದೆ....

ಬುಧವಾರ, ನವೆಂಬರ್ 2, 2011

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕರುನಾಡ ತಾಯಿ ಸದಾ ಚಿನ್ಮಯಿ...








ಕನ್ನಡ ತಾಯಿಯ ಮಕ್ಕಳು ನಾವು ಭಾಗ್ಯವಂತರು
ಕರುನಾಡ ಹೆಮ್ಮೆಯ ಕುಡಿಗಳು ನಾವೇ ಸಿರಿವಂತರು
ಶ್ರೀಗಂಧದ ಸೊಬಗಿನಲ್ಲಿ ಕಸ್ತೂರಿ ಕಂಪಿನ ನಾಡು ನಮ್ಮದು
ಹಸಿರು ವನದ ಚೆಲುವ ಬೀರಿ ಮೆರೆವ ಬೀಡು ನಮ್ಮದು
ಜೋಗದ ಸಿರಿ ಬೆಳಕಿನಲ್ಲಿ ಹೊಳೆವ ಚೆಲುವ ನಾಡಿದು
ಸುರಿವ ಮಳೆ ಹನಿಯಲ್ಲು ಕನ್ನಡದ ಹೊನಲು ಸುರಿವುದು
ಸಂಸ್ಕೃತಿಯ ತವರೂರು ನಮ್ಮ ಚೆಲುವ ನಾಡಿದು
ಈ ತನುಜಾತೆಯ ಮಡಿಲಲ್ಲಿ ಜನಿಸಿದ ಪುಣ್ಯ ನಮ್ಮದು
ಕಾವೇರಿಯ ಹೃದಯದಲ್ಲಿ ಜೇನಿನ ಹೊಳೆಯು ಹರಿವುದು
ಮರೆಯದಿರು ಕನ್ನಡವ ಈ ನಿನ್ನ ಜೀವವಿರುವವರೆಗೂ
ಈ ಮಣ್ಣಿನ ಮಮತೆಯು ನಿನಗೆ ಜನ್ಮ ನೀಡಿಹುದು
ತೊರೆಯದಿರು ಕನ್ನಡವ ಬೆಳೆಸದಿರು ಪರಭಾಷೆಯ ವ್ಯಾಮೋಹವ
ಕನ್ನಡಕ್ಕೆ ಸಾಟಿಯಿಲ್ಲ ಇಲ್ಲಿ ಹುಟ್ಟುವ ಪುಣ್ಯ ಎಲ್ಲರಿಗು ದೊರೆಯುವುದಿಲ್ಲ...
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕರುನಾಡ ತಾಯಿ ಸದಾ ಚಿನ್ಮಯಿ...

ಗುರುವಾರ, ಮಾರ್ಚ್ 10, 2011

ನಮ್ಮೊಲವ ಕಾದಂಬರಿ ಬರೆಯುವೆ ಕೈ ನನದಾಗಲಿ...




ಬಾ ಕನಸೇ ಜೊತೆಯಲ್ಲಿ
ಒಂದಾಗು ನನ್ನ ಬಾಳಿನಲಿ
ನೀ ನಡೆವ ಹಾದಿಯಲಿ
ಮುಳ್ಳೆಲ್ಲ ಹೂವಾಗಲಿ
ನಿನ್ನೊಲವ ಹೊನಲಿನಲ್ಲಿ
ಸಿಹಿ ಪಾಲು ನನಗಿರಲಿ
ಚಿಮ್ಮುವ ನೀರ ಹನಿಯಲಿ
ನಿನ್ನ ಹೂ ನಗುವು ಕಂಗೊಳಿಸಲಿ
ನೀ ಕೊಡುವ ಸಿಹಿ ಪ್ರೀತಿಯಲಿ
ಈ ಜೀವನ ಕೊನೆಗೊಳ್ಳಲಿ
ನಮ್ಮೊಲವ ಕಾದಂಬರಿ
ಬರೆಯುವ ಕೈ ನನದಾಗಲಿ...

ಶುಕ್ರವಾರ, ಫೆಬ್ರವರಿ 11, 2011

ಮನಸಿನ ಮಾತು....



ಕಂಗಳಲಿ ಅವಿತಿರುವ ಕಣ್ಣೀರಿನ ಕಥೆಯ ಹೇಳಲಾರದೆ ಬಳಲುತಿದೆ ಈ ಮನವು

ಒಡಲೊಳಗೆ ಕೊರಗುತ್ತ ನಗಲಾಗದೆ ಮರುಗುತಿದೆ ಈ ತನುವು

ಈ ನೋವಿಗೆ ಕಾರಣವೇನೆಂದು ಹೇಳಲಾಗದೆ ನಡುಗುತಿದೆ ಹೃದಯವು

ಮನದಲ್ಲಿ ದುಗುಡವ ಅಡಗಿಸಿಕೊಂಡು ನಗಲಾರೆ ಎಂದಿದೆ ಈ ಮೊಗವು

ಈ ಇರುಳು ಕವಿದ ಮನಕೆ ಬೆಳಕು ನೀಡುವರು ಯಾರೋ ನಾ ಅರಿಯಲಾರೆ..?

ಎಂದೋ ಕರಗಿರುವ ಪ್ರೇಮ ಚಂದಮಾಮ ಹೊರಟುಬಿಡುವ ಕಾರ್ಮುಗಿಲ ಚಿಥೆಗೆ

ಇಂದು ಜೊತೆಗೇನೆ ಸಾಗೋ ನನ್ನ ನೆರಳು ಬೇಸರದಿ ಬರುತಲಿದೆ ಜೊತೆಗೆ

ಮುಳ್ಳುಗಳ ನಡುವೆ ಅಡಗಿರುವ ಈ ಹೂವಿಗೆ ಸಂತಸವ ನೀಡುವರು ಯಾರೋ ನಾ ಅರಿಯಲಾರೆ...?

ಗುರುವಾರ, ಫೆಬ್ರವರಿ 10, 2011

ನೀ ನನ್ನಿಂದ ದೂರವಾದರೇನಂತೆ ಎಂದೆಂದಿಗೂ ನಾ ನಿನ್ನವಳಾಗಿರುವೆನು...


ಮನಸು ಹಂಚಿಕೊಂಡೆನು ನೀನಿಟ್ಟ ಕನಸು ನೆಚ್ಚಿಕೊಂಡೆನು
ಈ ಹೃದಯದ ಕೋಟೆಯೊಳಗೆ ನಿನ್ನ ಬಿಂಬವ ಸ್ತಾಪಿಸಿಕೊಂಡೆನು
ಹಗಲಿರುಳು ನಿನ್ನ ನೆನಪಲ್ಲೇ ನಾ ಕಾಲವನ್ನು ಸರಿಸಿಕೊಂಡೆನು
ನಿನ್ನೊಲವ ಹೂಬನದಲ್ಲಿ ಚಿಟ್ಟೆಯಂತೆ ಹಾರಿ ನಾ ನಿನ್ನವಳಾದೆನು
ಇಂದೇನಾಯಿತು ನಿನಗೆ ನನ್ನಲ್ಲಿ ಅದ್ಯಾವ ತಪ್ಪು ಕಂಡೆಯೋ ನಾ ಅರಿಯೆನು
ಕಂಗಳು ನಾ ನೋಟವು ನೀ ನೀನಿರದೆ ಗೆಳೆಯ ಅಂಧಳು ನಾನು
ನೀರಿರದೆ ಮೀನಿರದು ನೇಸರನು ಇರದೆ ಹಸಿರಿರುವುದೇನು
ಮನಸಲ್ಲೇ ಒಂದಾದ ಈ ಪ್ರೀತಿಗೆ ದೂರ ಇಂದು ನ್ಯಾಯವೇನು
ಪ್ರತಿ ಕಣ್ಣ ಹನಿಯನ್ನು ನಿನ್ನ ನೆನಪಿಗೆಂದೇ ನಾ ಮೀಸಲಿಟ್ಟೆನು
ನೀ ಕೊಟ್ಟ ಸಿಹಿ ಪ್ರೀತಿಯ ನಾ ಮರೆತು ಕೂಡ ಮರೆಯಲಾರೆನು
ನನ್ನುಸಿರ ಕಣಕಣದಲ್ಲೂ ನಿನ್ನಯ ಹೆಸರ ಬರೆದಿಡುವೆನು
ನೀ ನನ್ನಿಂದ ದೂರವಾದರೇನಂತೆ ಎಂದೆಂದಿಗೂ ನಾ ನಿನ್ನವಳಾಗಿರುವೆನು...

ಮಂಗಳವಾರ, ನವೆಂಬರ್ 23, 2010



























ಪ್ರೀತಿ ನೀ ಹೀಗೇಕೆ ಎಲ್ಲರ ನಗುವ ದೋಚುವ ಮನಸೇಕೆ
ಗೆಜ್ಜೆಗಳಂತೆ ಕುಣಿದು ಹೆಜ್ಜೆಯ ಗುರುತಾಗಿ ನಲಿದು
ಸುಡುವ ಬಿಸಿಲಲಿ ತಂಗಾಳಿಯ ಬೀಸಿ ಹೀಗೆ ಮರೆಯಾದೆ ಏತಕೆ
ಒಳಗೂ ಮೌನ ಹೊರಗೂ ಮೌನ ಮನದ ತುಂಬಾ ನೀನೆ
ನಿನ್ನ ಪ್ರೀತಿಯು ಸಿಕ್ಕ ಮರುಕ್ಷಣದಲ್ಲಿ ಬೇರೆಲ್ಲ ದೂರಾನೆ
ಮುಳ್ಳುಗಳಲ್ಲೇ ನಗುತಿದೆ ಹೂವು ಭಯವೇ ಇಲ್ಲ ಬರಲಿ ಸಾವು
ದೂರಾದೆ ಏಕೆ ನೀಡಿ ನೋವು ನೀ ಬರದೆ ಸಾಗದು ಈ ಬಾಳು
ದೂರಾಗದಿರು ನೀನೆಂದು ಅಗಲಿ ಬಾಳಲಾರೆನು ಎಂದೆಂದೂ
ಒಳಗೂ ಇರದೇ ಹೊರಗೂ ಬರದೆ ಕೊಲ್ಲುತಿದೆ ಈ ಮೌನ
ಕನಸುಗಳೆಲ್ಲ ಜಾರಿದಮೇಲೆ ಕಣ್ಣಿಗೆ ಅವಮಾನ
ಕಳೆದುಕೊಂದ ಪ್ರೇಮಿಯು ತಾನೇ ಪ್ರೀತಿಯ ಬೆಲೆಯ ತಿಳಿದಿರುತಾನೆ
ಸಾಯಿಸದು ಈ ಪ್ರೀತಿ ಬದುಕಿಸದು ಒಂದೇ ರೀತಿ.....
ಪ್ರೀತಿ ನೀ ಹೀಗೇಕೆ ಎಲ್ಲರ ನಗುವ ದೋಚುವ ಮನಸೇಕೆ...?

ಮಂಗಳವಾರ, ಸೆಪ್ಟೆಂಬರ್ 28, 2010




ನನಗಾಗಿ ನಿನಗಾಗಿ ಕೇಳಮ್ಮ ಹೃದಯ ಹೇಳುವೆ ನನ್ನ ವ್ಯಥೆಯ
ಈ ಮೌನ ಮಾತಾಗಿ ಹಾಡಾಗೊ ಸಮಯ ಒಳಗಿದೆ ನೂರು ವಿಷಯ
ಅಲ್ಲೊಬ್ಬ ರಾಜ ಇಲ್ಲೊಬ್ಬ ರಾಣಿ ನಡೆಸೋರು ಯಾರು ಮನಸಿನ ದೋಣಿ
ತುಂಬಿದಾ ಮನವ ಚೆಲ್ಲಿದ ಒಲವ ......
ಈ ಒಂಟಿ ಹೆಣ್ಣಿಗೆ ಸಂಗಾತಿ ಸಿಕ್ಕಿದ ಪ್ರತಿ ಕ್ಷಣ ಪ್ರೀತಿ ಹಂಚಿದ
ನೀನೇನೆ ನನ್ನೋನು ಅಂತಂತ ಹೆಣ್ಣಿಗೆ ಹೃದಯದಲಿ ಜಾಗ ನೀಡಿದ
ಗುಣವೇ ಗುರುತು ಅವನಿಗೆ ಋಣವೇ ಗುರುತು ಅವಳಿಗೆ
ನನಗಾಗಿ ನಿನಗಾಗಿ ಕೇಳಮ್ಮ ಹೃದಯ ಹೇಳುವೆ ನನ್ನ ವ್ಯಥೆಯ
ಈ ಮೌನ ಮಾತಾಗಿ ಹಾಡಾಗೊ ಸಮಯ ಒಳಗಿದೆ ನೂರು ವಿಷಯ
ಕಾಲಕ್ಕೆ ತಿಳಿಯದೆ ಒಲವನ್ನು ನೀಡಿದ ಅವಳ ಬಾಳಿಗೆ ಬೆಳಕಾಗಿ ಹೋದ
ಮನಸಿಗೆ ತಿಳಿಯದೆ ಹುಟ್ಟುವ ಪ್ರೀತಿಗೆ ಕನಸನ್ನೇ ಧಾರೆಯೆರೆದ
ಅವನ ನಗುವೆ ಉಸಿರು ಅವಳಿಗೆ ಅವಳ ಒಲವೆ ಉಸಿರು ಅವನಿಗೆ
ನನಗಾಗಿ ನನ್ನೋನೆ ಆದೋನು ನೀನು ವಂದಿಸುವೆ ನಿನಗೆ
ವಾತ್ಸಲ್ಯವನ್ನೇ ಕಂಡಿರದೊಳ ನಿನ್ನವಳಾಗಿ ಪಡೆದೊನು ನೀನು
ವಂದನೆ ವಂದನೆ ಮರೆಯನು ನಿನ್ನನು
...