ಶುಕ್ರವಾರ, ಜುಲೈ 23, 2010

ನೀ ಮತ್ತೆ ಸಿಗುವೆಯಾ ಗೆಳೆಯನೆ ಹೃದಯ ಬಯಸಿದೆ...

ಮನ ಕಂಡ ಎಷ್ಟೋ ಕನಸದು ಕೊನೆಗೂ ನನಸಾಗಲೇ ಇಲ್ಲ

ನಿನ್ನ ಕಂಗಳಲ್ಲಿ ಕನಸಾಗಲೆಂದು ಬಯಸಿದ ನನ್ನ ಮನವಿಂದು ಸೋತಿದೆಯಲ್ಲ

ಉಸಿರಿನಲ್ಲಿ ಬೆರೆತುಹೋದ ನಿನ್ನ ಪ್ರೀತಿಯ ಹೊರತು ನಾನೆನ್ನು ಅರಿತಿಲ್ಲ

ಹೇಳಲಾಗದೆ ಬಳಲಿದೆ ಮನ ಇಂದು ಒಮ್ಮೆ ಹಿಂದಿರುಗಿ ನೋಡಲಾರೆಯ ನಲ್ಲ

ಪ್ರೀತಿಕಂಡ ಮನಸ್ಸು ಒಂದು ಮಗುವಿನ ಹಾಗೆ ಅಳುವುದೇ ಹೊರತು ಮಾತನಾಡಲು ಬಾಯಿಲ್ಲ

ನನ್ನ ಪ್ರೀತಿಯ ಸಂದೇಶವ ತಲುಪಿಸಲು ನನಗೆ ಯಾವ ಮಾರ್ಗವು ತಿಳಿದಿಲ್ಲ

ನನ್ನ ಕಂಗಳಲ್ಲಿ ಅವಿತಿರುವ ಒಲವ ಬಾಷೆಯು ನಿನಗೇಕೆ ಕಾಣಲಿಲ್ಲ

ಕಾಣದ ದಾರಿಯ ನಡುವಲ್ಲಿ ನಿನ್ನೊಲವ ಕಾಣದೆ ಕತ್ತಲೆಯಲ್ಲಿ ನಾ ಕುಳಿತಿಹೆ ನಲ್ಲ

ಒಮ್ಮೆ ನೀ ಬಂದು ನನ್ನ ಸೇರಿದರೆ ಆ ಇರುಳಿನಲ್ಲಿ ಹೊಂಬೆಳಕ ಕಾಣುವೆನಲ್ಲ

ನೀನಿದ್ದ ದಾರಿಯಲಿ ನನಗೆ ಇರುಳು ಕೂಡ ಹಗಲಿನಂತೆ ಕಾಣುತಿಹುದಲ್ಲ

ಮರೆತು ಕೂಡ ಮರೆಯಲಾಗದು ನಿನ್ನ ನೀ ತಂದ ಮದುರವಾದ ಭಾವನೆಗಳನೆಲ್ಲ

ಕಾತುರದ ಕಣ್ಣಂಚಲಿ ಮುಗುಳುನಗೆಯ ಬೀರಿ ನಿನ್ನ ನಗೆಗೆ ಈ ಮನ ಸೋತಿದೆಯಲ್ಲ

ಈ ಹೃದಯವು ನಿನಗಾಗಿ ಮಿಡಿಯುತಿದೆ ಎಂದೆಂದಿಗೂ ಅದು ನಿನ್ನ ಮರೆಯುವುದಿಲ್ಲ....2 ಕಾಮೆಂಟ್‌ಗಳು: