ಸೋಮವಾರ, ಜುಲೈ 19, 2010

ಕರೆದುಬಿಡು ನನ್ನ ನೀ ಬೇಗ ಬರೆದು ಕೊಡು ಎಲ್ಲ ಆ ವೇಗ....ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ

ಮರಳಿ ಕೊಡುವೆಯಾ ಗೆಳೆಯ ಮರಳಿ ಬರುವೆಯಾ..?

ಮಿಂಚಿನಂತೆ ಮಿನುಗಿಹೋದ ಆ ಹೊಳೆಯುವ ನಯನದಿ

ಮರಳಿ ನೋಡುವೆಯಾ ಗೆಳೆಯ ಮರಳಿ ಬರುವೆಯಾ...?

ಸುಂದರವಾದ ಸ್ವಪ್ನದಲಿ ತೇಲಿ ರಂಗೆನಿಸಿದ ನಗುವಲಿ

ಮರಳಿ ಕರೆಯುವೆಯಾ ಗೆಳೆಯ ಮರಳಿ ಬರುವೆಯಾ...?

ಕಂಪಿಸುವ ಕರದಲಿ ಹೂಗಳ ಹಿಡಿದು ನಲಿಸಿದ ಮನ ನಿನ್ನದು

ಮರಳಿ ಹೂಗಳ ತರುವೆಯಾ ಗೆಳೆಯ ಮರಳಿ ಬರುವೆಯಾ..?

ಒಲವೆಂಬ ದೋಣಿಯಲಿ ನಿನ್ನೊಡನೆ ಸಂಚರಿಸಿದ ಕಾಲವದು

ಮರಳಿ ನನ್ನೊಲವಿನ ಪಯಣಿಗನಾಗುವೆಯಾ ಗೆಳೆಯ ಮರಳಿ ಬರುವೆಯಾ...?

ನಿನ್ನ ಮಿಂಚುವ ಕಣ್ಣಂಚಲ್ಲಿ ನಾ ಹೊಳೆಯುವ ಬಿಂಬವಾದ ದಿನವದು

ನಿನ್ನ ಕಂಗಳಲ್ಲಿ ನನ್ನ ತುಂಬಿ ಕೊಳ್ಳುವೆಯಾ ಗೆಳೆಯ ಮರಳಿ ಬರುವೆಯಾ...?

2 ಕಾಮೆಂಟ್‌ಗಳು: