ಸೋಮವಾರ, ಮೇ 10, 2010

ಚಂಚಲ ಮನಸಿಗೆ ಬೇಲಿಯನು ಹಾಕಲು ಸಾಧ್ಯವಾಗುವುದೇ ?


ಮನದ ಮಾತುಗಳ ಪದಗಳಲಿ ನುಡಿಯ ಬಹುದೇ

ಅರಳಿದ ಪ್ರೀತಿಯ ಬಂಧಿಸಿ ಇಡಲಾಗುವುದೇ

ನಿಸ್ವಾರ್ಥ ಸ್ನೇಹವನು ಅನುಮಾನದಿ ನೋಡಲಾಗುವುದೆ

ಚಂಚಲ ಮನಸಿಗೆ ಬೇಲಿಯನು ಹಾಕಲು ಸಾಧ್ಯವಾಗುವುದೇ ?

ಒಂದು ಪುಟ್ಟ ನಗು ಯಾರ ಹೃದಯವನು ಕದಿಯುವುದೋ

ಬಲ್ಲವರು ಯಾರು ಮನದಲಿ ಮೂಡಿದ ಭಾವನೆಗೆ ಅರ್ಥವನು ನೀಡುವವರು ಯಾರು

ಮನದ ಮನೆಯ ಕದವದು ತೆರೆದಿದೆ , ಅದರ ಒಡೆಯರು ಎಂದು ...

ಬಂದಾರು ಕಾಯುತ ನಿಂತಿದೆ ಮುಗ್ದ ಹೃದಯ ಅದರ ದೀಪವ ಬೆಳಗುವವರು ಯಾರು ?

ಒಂದು ಕ್ಷಣ ಇರುವ ಹಾಗೆ ಇರುವುದಿಲ್ಲ ಮನ ಕಾರಣ ಅರಿವಿಲ್ಲ

ನಿನ್ನ ಕಂಡ ಕ್ಷಣ ಏಕೆ ನನ್ನ ನಾ ಮರೆತೇನೋ ಗೊತ್ತಿಲ್ಲ ಆದರೆ ಒಂದಂತು ಸತ್ಯ ,

ನೀನಿಲ್ಲದೆ ನನಗೆ ಜೀವನವಿಲ್ಲ ನೀನಿಲ್ಲದೆ ಹೋದರೆ ನನ್ನ ಬದುಕಿಗೆ ಅರ್ಥವಿಲ್ಲ !

ಏನೆಲ್ಲಾ ಬರೆಯುತ್ತೇವೆ ನಾವು ಪ್ರೀತಿ - ಸ್ನೇಹದ ಅರಿವಿಲ್ಲ

ನಿರ್ಮಲ ಸ್ನೇಹವನೆ ಅನುಮಾನದಲಿ

ನೋಡುವೆವಲ್ಲ ಸ್ನೇಹ ಪ್ರೀತಿಯ ಅರ್ಥವನೆ ಕೆಡಿಸುವೆವಲ್ಲ

ಎರಡೂ ಬೇರೆ ಎಂದುಕೊಂಡು ಯಾಕೆ ಜೊತೆಯಾಗಿ ನಡೆಯುವುದಿಲ್ಲ !

ಈ ನನ್ನ ಪ್ರಶ್ನೆಗೆ ನಿಮ್ಮಲಿ ಉತ್ತರವಿರಬಹುದೇ ನನಗೆ ತಿಳಿದಿಲ್ಲ

ಮನವೇಕೊ ಇಂದೂ ಭಾವನೆಗಳಲಿ ತೇಲಿ ಹೋಗಿದೆಯಲ್ಲ

ನನ್ನ ಭಾವನೆಗೆ ಸ್ಪಂದಿಸುವ ಜೀವ ಬೇಕಿದೆಯಲ್ಲ

ಆ ಸ್ನೇಹದ ಹಾದಿಯಲಿ ನೀವು ಜೊತೆಯಾಗಿ ಬರುವಿರಲ್ಲ !

1 ಕಾಮೆಂಟ್‌: