ಸೋಮವಾರ, ಮೇ 10, 2010

ಹಗಲುಗನಸಿನಲಿ ಗಾಳಿಗೊಪುರದಲಿ ಕುಳಿತೆನಾ ಬಳಿದೆನಾ ಹೊಳಪು... ನಾಳೆ ಎಂಬುದಕೆ ಹಿಂದು ಮುಂದು ಇಲ್ಲ ಜೊತೆಗೇಕೆ ಬೆಂಬಿಡದ ನೆನಪು...


ಈ ಬಾಳದಾರಿಲಿ ಯಾರಿಗೆ ಯಾರಿಲ್ಲ ,
ಯಾರನ್ನು ದೂರೋದು ಯಾರದು ತಪ್ಪಿಲ್ಲ
ಯಾರಿಗೆ ಯಾರೋ ಆ ಬ್ರಹ್ಮ ಬರೆದ ಅದರ ಅರಿವಿಲ್ಲ
ಹುಚ್ಚು ಪ್ರೀತಿಯ ನಂಬಿ ಮನ ಓಡಿದೆಯಲ್ಲ
ಭ್ರಮೆಯ ಲೋಕದಲಿ ಮನ ಕನಸ ಕಾಣತೊಡಗಿದೆಯಲ್ಲ !
ಏನೆಂದು ಬರೆಯಲಿ ಹೇಳು ನಾ ನಿನ್ನ ಮನವ ಅರಿಯೆನು
ಯಾವ ರೀತಿ ಓದಲಿ ಕಾಣದಂತ ಸಾಲನು
ಏನೆಂದು ಬಣ್ಣಿಸಲಿ ಹೇಳು ನಿನ್ನ ಪ್ರೀತಿಯನು
ನಂಬಿಕೆಯಲಿ ನಾ ದಿನ ಕಳೆಯುತಿರುವೆನು !
ಈ ಬಾಳ ಹಾದಿಲಿ ಯಾರು ಯಾರ ಜೊತೆಗೋ ಅರಿವಿಲ್ಲ
ನಮ್ಮ ಜೊತೆಗೆ ಅವರೆಂದು ನಂಬಿ ಕೊಂಡಿದ್ದೆವಲ್ಲ
ಜೊತೆ ಸಿಗದಾಗ ಮನ ಬೇಸರದಿ ನೊಂದಿ ನಿಂತಿತಲ್ಲ
ನಮ್ಮ ಹುಚ್ಚುತನವ ಅರಿಯದೆ ಅವರನು ದೂರ ತೊಡಗಿದೆಯಲ್ಲ !
ನಮಗೆ ಯಾರೆಂದು ಬ್ರಹ್ಮ ಬರೆದಿರುವ ಅರಿವಿಲ್ಲ
ಮೆಚ್ಚಿಕೊಂಡವರ ನಮ್ಮವರೆಂದು ಕೊಂಡೆವಲ್ಲ ಅವರ ಹಚ್ಚಿಕೊಂಡು ಕುಳಿತೆವಲ್ಲ !
ಮನದಿ ಬೇರೆ ಯಾರ ಚಿತ್ರ ಕಾಣದಲ್ಲ
ಸಿಗುವುದಿಲ್ಲ ಎಂದಾಗ ಮನ ಸುಮ್ಮನೆ ಅವರ ದೂರಿತಲ್ಲ
ಈ ಬಾಳದಾರಿಲಿ ಯಾರಿಗೆ ಯಾರಿಲ್ಲ ,
ಯಾರನ್ನು ದೂರೋದು ಯಾರದು ತಪ್ಪಿಲ್ಲ....

2 ಕಾಮೆಂಟ್‌ಗಳು: