ಶುಕ್ರವಾರ, ಜುಲೈ 23, 2010

ನೀ ಮತ್ತೆ ಸಿಗುವೆಯಾ ಗೆಳೆಯನೆ ಹೃದಯ ಬಯಸಿದೆ...

ಮನ ಕಂಡ ಎಷ್ಟೋ ಕನಸದು ಕೊನೆಗೂ ನನಸಾಗಲೇ ಇಲ್ಲ

ನಿನ್ನ ಕಂಗಳಲ್ಲಿ ಕನಸಾಗಲೆಂದು ಬಯಸಿದ ನನ್ನ ಮನವಿಂದು ಸೋತಿದೆಯಲ್ಲ

ಉಸಿರಿನಲ್ಲಿ ಬೆರೆತುಹೋದ ನಿನ್ನ ಪ್ರೀತಿಯ ಹೊರತು ನಾನೆನ್ನು ಅರಿತಿಲ್ಲ

ಹೇಳಲಾಗದೆ ಬಳಲಿದೆ ಮನ ಇಂದು ಒಮ್ಮೆ ಹಿಂದಿರುಗಿ ನೋಡಲಾರೆಯ ನಲ್ಲ

ಪ್ರೀತಿಕಂಡ ಮನಸ್ಸು ಒಂದು ಮಗುವಿನ ಹಾಗೆ ಅಳುವುದೇ ಹೊರತು ಮಾತನಾಡಲು ಬಾಯಿಲ್ಲ

ನನ್ನ ಪ್ರೀತಿಯ ಸಂದೇಶವ ತಲುಪಿಸಲು ನನಗೆ ಯಾವ ಮಾರ್ಗವು ತಿಳಿದಿಲ್ಲ

ನನ್ನ ಕಂಗಳಲ್ಲಿ ಅವಿತಿರುವ ಒಲವ ಬಾಷೆಯು ನಿನಗೇಕೆ ಕಾಣಲಿಲ್ಲ

ಕಾಣದ ದಾರಿಯ ನಡುವಲ್ಲಿ ನಿನ್ನೊಲವ ಕಾಣದೆ ಕತ್ತಲೆಯಲ್ಲಿ ನಾ ಕುಳಿತಿಹೆ ನಲ್ಲ

ಒಮ್ಮೆ ನೀ ಬಂದು ನನ್ನ ಸೇರಿದರೆ ಆ ಇರುಳಿನಲ್ಲಿ ಹೊಂಬೆಳಕ ಕಾಣುವೆನಲ್ಲ

ನೀನಿದ್ದ ದಾರಿಯಲಿ ನನಗೆ ಇರುಳು ಕೂಡ ಹಗಲಿನಂತೆ ಕಾಣುತಿಹುದಲ್ಲ

ಮರೆತು ಕೂಡ ಮರೆಯಲಾಗದು ನಿನ್ನ ನೀ ತಂದ ಮದುರವಾದ ಭಾವನೆಗಳನೆಲ್ಲ

ಕಾತುರದ ಕಣ್ಣಂಚಲಿ ಮುಗುಳುನಗೆಯ ಬೀರಿ ನಿನ್ನ ನಗೆಗೆ ಈ ಮನ ಸೋತಿದೆಯಲ್ಲ

ಈ ಹೃದಯವು ನಿನಗಾಗಿ ಮಿಡಿಯುತಿದೆ ಎಂದೆಂದಿಗೂ ಅದು ನಿನ್ನ ಮರೆಯುವುದಿಲ್ಲ....



ಸೋಮವಾರ, ಜುಲೈ 19, 2010

ಕರೆದುಬಿಡು ನನ್ನ ನೀ ಬೇಗ ಬರೆದು ಕೊಡು ಎಲ್ಲ ಆ ವೇಗ....



ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ

ಮರಳಿ ಕೊಡುವೆಯಾ ಗೆಳೆಯ ಮರಳಿ ಬರುವೆಯಾ..?

ಮಿಂಚಿನಂತೆ ಮಿನುಗಿಹೋದ ಆ ಹೊಳೆಯುವ ನಯನದಿ

ಮರಳಿ ನೋಡುವೆಯಾ ಗೆಳೆಯ ಮರಳಿ ಬರುವೆಯಾ...?

ಸುಂದರವಾದ ಸ್ವಪ್ನದಲಿ ತೇಲಿ ರಂಗೆನಿಸಿದ ನಗುವಲಿ

ಮರಳಿ ಕರೆಯುವೆಯಾ ಗೆಳೆಯ ಮರಳಿ ಬರುವೆಯಾ...?

ಕಂಪಿಸುವ ಕರದಲಿ ಹೂಗಳ ಹಿಡಿದು ನಲಿಸಿದ ಮನ ನಿನ್ನದು

ಮರಳಿ ಹೂಗಳ ತರುವೆಯಾ ಗೆಳೆಯ ಮರಳಿ ಬರುವೆಯಾ..?

ಒಲವೆಂಬ ದೋಣಿಯಲಿ ನಿನ್ನೊಡನೆ ಸಂಚರಿಸಿದ ಕಾಲವದು

ಮರಳಿ ನನ್ನೊಲವಿನ ಪಯಣಿಗನಾಗುವೆಯಾ ಗೆಳೆಯ ಮರಳಿ ಬರುವೆಯಾ...?

ನಿನ್ನ ಮಿಂಚುವ ಕಣ್ಣಂಚಲ್ಲಿ ನಾ ಹೊಳೆಯುವ ಬಿಂಬವಾದ ದಿನವದು

ನಿನ್ನ ಕಂಗಳಲ್ಲಿ ನನ್ನ ತುಂಬಿ ಕೊಳ್ಳುವೆಯಾ ಗೆಳೆಯ ಮರಳಿ ಬರುವೆಯಾ...?

ಶನಿವಾರ, ಜುಲೈ 3, 2010

ಕಾಯುವೆ...






ಈ ಮುಸ್ಸಂಜೆಯಲ್ಲಿ


ನೀ ನನ್ನ ಜೊತೆಜೊತೆಯಲಿ


ನನ್ನ ಕಣ್ಣಲ್ಲಿ ಅವಿತಿರುವ ಪುಟ್ಟ ಕನಸಿನಲ್ಲಿ ತೇಲಿ


ಒಲವೆಂಬ ದೋಣಿಯಲ್ಲಿ ಒಂಟಿಯಾಗಿ ಸಾಗುತ್ತಿರುವೆ


ನೀ ನನ್ನ ಮನಗೆದ್ದ ಒಲವೆ ನನ್ನ ಮನೆಗೆಂದು ಕರೆವೆ


ನೀ ಕರೆಯುವ ಕ್ಷಣಕ್ಕಾಗಿ ನಾ ಕೊನೆವರೆಗೂ ಕಾಯುವೆ...

ಸೋಮವಾರ, ಜೂನ್ 28, 2010

ಹೃದಯದಿ ಪ್ರೆಮತರಂಗ ನೀ ಮೀಟಿದೆ...

ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಒಲವಿನ ಹೂಗಳ ಮಳೆಯ ನೀ ಸುರಿಸಿದೆ
ಕುಣಿಯುತ ಮನಸಿದು ನಿನ್ನೆಡೆಗೆ ಸಾಗಿದೆ
ಸಾಗುತ ದೂರ ದೂರ ನಡೆಯೆಂದಿದೆ
ಹೃದಯದಿ ಪ್ರೀತಿ ಮಳೆಹನಿಯಾಗಿ ದುಮುಕಿದೆ
ನನ್ನುಸಿರಿಗೆ ಉಸಿರಾಗಿ ನಿನ್ನ ಹೆಸರು ಬರೆದಿದೆ
ಕಾಲ ಬರೆದ ಹೊಸದು ಹಾಡು ನೀ ಹಾಡಿದೆ
ಮನದ ಪುಟದಿ ಒಲವ ಕವಿತೆ ನೀ ಬರೆದೆ
ತಂತಿ ಹರಿದ ವೀಣೆಯಲ್ಲಿ ಶ್ರುತಿಯ ನೀ ಹರಿಸಿದೆ
ಹೃದಯದಿ ಪ್ರೆಮತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ...



ಶನಿವಾರ, ಜೂನ್ 5, 2010

ಮನದ ಪುಟದಿ ನೀ ಬರೆದ ಗೀತೆ ಮರೆಯಲಾರೆನು....


ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯಗುರುತು
ತೊರೆದು ಹೋಗದಿರು ನನ್ನ ನೀ ಮರೆತು
ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು
ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು
ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು
ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು
ಯಾವುದ ಮರೆತರೂ ಮರೆಯಲಾಗುವುದೇ ಉಸಿರು
ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು...

ಬುಧವಾರ, ಮೇ 26, 2010

ಮನಸು ಮನಸ್ಸುಗಳ ಪಿಸುಮಾತು...


ಮನಸು ಹೇಳಬಯಸಿದೆ ನೂರೊಂದು
ತುಟಿಯಮೇಲೆ ಬಾರದಿಹ ಮಾತೊಂದು
ಹೃದಯ ಹಾಡ ತೊಡಗಿದೆ ಹಾಡೊಂದು
ಒಮ್ಮೆ ಕೇಳಲಾರೆಯಾ ಏನೆಂದು....
ಮನಸು ಕಾಣ ತೊಡಗಿತು ಕನಸೊಂದು...
ನನಸಾಗುವ ಮುನ್ನ ಕಳೆದು ಹೋಯಿತಿಂದು
ಮುಡಿಪಾಗಿದೆ ಈ ಜೀವ ನಿನಗೆಂದು
ಅಗಲಿ ಬಾಳಲಾರೆನು ನಿನ್ನ ಬಿಟ್ಟು ಎಂದೆಂದು...




ಮಂಗಳವಾರ, ಮೇ 11, 2010

ಮಾತಿಗೆ ಸಿಗದ , ಅರ್ಥದಲಿ ವಿವರಿಸಲಾಗದ, ಒಲುಮೆಯ ಪ್ರತಿ ರೂಪ , ಬಾಳಿಗೆ ದಾರಿ ದೀಪ "ಅಮ್ಮ"

ತಾಯಿ ಎನ್ನುವ ಸವಿಮಾತು ಎಂಥ ಚೆಂದ

ನಿನ್ನ ಮಡಿಲಲಿ ಮಲಗಿಸಿ ಬೆಳೆಸಿದೆ ತುಂಬಿ ಮಮತೆಯ ಆನಂದ

ನಾ ಹೇಗೆ ತೀರಿಸಲಿ ನಿನ್ನ ಋಣವ ನಿನ್ನ ಪ್ರೀತಿಯೇ ಬಲುಚೆಂದ

ನವಮಾಸ ನರಳಿದರು ನೀ ನೀಡಲಿಲ್ಲ ತುಸು ನೋವು ಎಂದಿಗೂ..

ಹುಸಿಯಾಗದು ನಿನ್ನ ಪ್ರೀತಿ ಬಣ್ಣಿಸಲಾಗದು ಅದರ ರೀತಿ...

ಮಗುವಿಗಿಲ್ಲ ನಿನ್ನಿಂದ ಬೀತಿ ಸುರಿಸುವೆ ಸ್ವಾರ್ಥವಿಲ್ಲದ ಪ್ರೀತಿ...

ನೀನಿಲ್ಲದೆ ತವರಿಲ್ಲ ನೀ ಮರೆಯಾದರೆ ಕೊನೆಗೊಳ್ಳುವುದು ತವರಿನ ಋಣ...

ದಯಮಾಡಿ ತೊರೆಯದಿರು ನನ್ನ ತುಂಬಿ ಧುಕ್ಕದ ಧಾರುಣ...

ನೀ ನೋವುಂಡರು ನಿನ್ನ ಕರುಳ ಬಳ್ಳಿಯಲ್ಲಿ ಮಾಡಿದೆ ನನ್ನನ್ನು ಜೋಪಾನ...

ಕಣ್ಣಿಗೆ ಕಾಣದ ದೇವರು ಶೃಷ್ಟಿಸಿದ ನಿನ್ನನು ಸಲ್ಲಿಸುವೆ ಅವನಿಗೆ ನನ್ನ ನಮನ...