ಸೋಮವಾರ, ಫೆಬ್ರವರಿ 22, 2010

ನಾ ಹೇಗೆ ಹೇಳಲಿ ನಿನಗೆ ಈ ನನ್ನ ಮನಸ್ಸಿನ ಕದನ ನಾ ಹೇಳಿದರು ನೀ ಕೇಳಿದರು ಇದೊಂದು ಪೂರ್ಣವಾಗದ ಕವನ



ಕನಸಾಗಲೆಂದು ಬಂದೆ ನೀ ನನಗೆ ಕಣ್ಣಿರು ತಂದೆ


ಮನಸ ಸೇರಲೆಂದೆ ನೀ ದೂರ ಸರಿಯೆಂದೆ....


ನನ್ನ ಕನಸು ಕರಗಿ ಕಂಬನಿ ಜಾರುವ ಮುನ್ನ...


ಒರೆಸು ನೀ ನನ್ನ ಕಣ್ಣಿರನ್ನ.....


ಸೊಗಸಾದ ಒಲವೊಂದು ಬಡಿಯುತಿದೆ ನಿನ್ನೆದೆಯ ಬಾಗಿಲನ್ನ...


ಒಮ್ಮೆ ಕಣ್ತೆರೆದು ನೋಡು ತುಂಬಿಕೊಂಡು ಒಲವನ್ನ.....


ಕಾದಿಹುದು ಸವಿಸುಂದರವಾದ ಕರವು ಹಿಡಿದು ಚೆಲುವ ಹೂವನ್ನು ....


ಒಮ್ಮೆ ಪಡೆದು ಸಾರ್ಥಕ ಮಾಡು ಆ ಬಡ ಮನಬಯಸುವ ಒಲವನ್ನು .....


ನೀನಿಲ್ಲದೆ ಆ ಮನವು ಸುರಿಸುತಿದೆ ಮಿಡಿವ ಕಂಬನಿಯನ್ನು .....


ದಿಕ್ಕಿಲ್ಲದೆ ನಿಂತಿದೆ ದಾರಿಯಲ್ಲಿ ಕಾಯುತ ನಿನ್ನ ಹೆಜ್ಜೆಯ ಗುರುತನ್ನು....


ನಿನ್ನೊಲವ ಗೆಲ್ಲಲು ಕನಸುಕಂಡು ಸೋತಿಹೆ ಮನವು ಕಾಯುತ ನಿನ್ನಲ್ಲಿ....


ಎಲ್ಲಿ ಹೋದೆ ನನ್ನ ನೋಡದೆ ನನ್ನೊಡನೆ ಮಾತಾಡದೆ ಮರೆಯಾಗಿ.....


ಕಾದಿಹೆನಾ ಕಣ್ಣಂಚಲಿ ಸಣ್ಣ ಅಸೆಯೊಂದಿಗೆ ಕುಳಿತು ನಿನ್ನ ನಿರೀಕ್ಷೆಯಲ್ಲಿ....

4 ಕಾಮೆಂಟ್‌ಗಳು: