ಸೋಮವಾರ, ಫೆಬ್ರವರಿ 22, 2010

ಸಾರುವ ಲೋಕಕೆ ಪ್ರೀತಿಯೊಂದೆ ಶಾಶ್ವತ ......


ಸುಳಿಯುತಿದೆ ಪ್ರೀತಿಯ ತಂಗಾಳಿ ಮನದಲಿ ಬೀಸಿ

ಹರಿಯುತಿದೆ ಕನಸ ನದಿಯು ಎದೆಯಲಿ ಹೂ ಹಾಸಿ

ನಿನ್ನ ಕಾಣುವ ನನ್ನ ಕಂಗಳಿಗೆ ತುಂಬಲಿ ಹೊಸ ಕನಸು

ಅರೆಕ್ಷಣ ನೀ ಮರೆಯಾದರು ನಿನ್ನಗಲಿ ಬಾಳದು ಈ ಮನಸು

ನಿನ್ನ ಕಣ್ಣ ನೋಟದಲಿ ಅಡಗಿದೆ ಎಂಥ ಮನಮೋಹಕ ಸೊಗಸು...

ಕುಸಿಯುವುದು ಈ ಮನ ನೀ ತೋರಿದರೆ ಮುನಿಸು......

ಕಾರಣ ಕೇಳಬೇಡ ನನಗೆ ತಿಳಿಯದು ಈ ತವಕದ ಒಗಟು....

ನೀನಿಲ್ಲದ ಬಕುದು ನನಗೆ ಜೇನಿಲ್ಲದ ಹೂವಿನ ಹಂದರ.....

ನಿನ್ನ ಕಾಣದೆ ನನ್ನ ಬದುಕಿನಲಿ ಬರಿ ನಶ್ವರ...

ಸಿಹಿಯಾದ ನಿನ್ನ ಮಾತು ಕೇಳದೆ ನನ್ನ ಬದುಕಾಗಿದೆ ಸವಿ ಇಲ್ಲದ ಸ್ವರ.....

ನನ್ನ ನಲ್ಮೆಯ ನಾವಿಕ ನೀನಾಗು ನನ್ನ ಬಾಳಿಗೆ ನಾದ ಸ್ವರ

ನಮ್ಮ ಸ್ನೇಹ ಹೀಗೆ ಸಾಗಲಿ ತುಂಬ ಒಲವ ಸವಿವಾಣಿ

ಯಾಕೆಂದರೆ ನೀ ನನ್ನ ಪಾಲಿನ ಸುಮದುರ ಕವಿವಾಣಿ......

2 ಕಾಮೆಂಟ್‌ಗಳು: